WitZip – ಕನ್ನಡ ಸ್ವರ ಪಝಲ್ (Kannada Swara Puzzle) ಎಂಬುದು ಕನ್ನಡದ ಸ್ವರಾಕ್ಷರಗಳನ್ನು (ಅ ದಿಂದ ಅಃ ವರೆಗೆ) ಸರಿಯಾದ ಕ್ರಮದಲ್ಲಿ ಜೋಡಿಸಿ ಆಡುವ ಒಂದು ಇಂಟರಾಕ್ಟಿವ್ ಒಗಟು (Puzzle) ಆಟವಾಗಿದೆ. ಇದನ್ನು ಮೊಬೈಲ್ ಮತ್ತು ಕಂಪ್ಯೂಟರ್ ಎರಡರಲ್ಲೂ ಸುಲಭವಾಗಿ ಆಡಬಹುದು. ಮಕ್ಕಳ ನೆನಪಿನ ಶಕ್ತಿ ಮತ್ತು ಕನ್ನಡ ಕಲಿಕೆಗೆ ಅತ್ಯುತ್ತಮ ಇಂಟರಾಕ್ಟಿವ್ ಗೇಮ್.
ಕನ್ನಡ ವರ್ಣಮಾಲೆ (Kannada Varnamale) ಯ ಸ್ವರಗಳು ಅ, ಆ, ಇ, ಈ, ಉ, ಊ, ಋ, ೠ, ಎ, ಏ, ಐ, ಒ, ಓ, ಔ ಮತ್ತು ಯೋಗವಾಹಗಳಾದ ಅಂ, ಅಃ ಅನುಸ್ವಾರ ಮತ್ತು ವಿಸರ್ಗ ವನ್ನು ಇಲ್ಲಿ ಬಳಸಿ ಕನ್ನಡ ಸ್ವರ ಪಝಲ್ ಗೇಮ್ ಮಾಡಲಾಗಿದೆ. ಕನ್ನಡ ಅಕ್ಷರಗಳ ಮೇಲೆ ಜ್ಞಾನ ಮತ್ತು ಕಲಿಕೆಯ ಉದ್ದೇಶವೇ ಈ ಮನರಂಜನೆ ಕೊಡುವ Witzone – WitZip ಕನ್ನಡ ಸ್ವರ ಪಝಲ್ ಗೇಮ್ (Kannada Swara Puzzle) ಆಗಿದೆ.
ಆಡುವ ವಿಧಾನ:
- ಗೇಮ್ ತೆರೆದಾಗ ಸ್ವರಾಕ್ಷರಗಳ ಗ್ರಿಡ್ ಮತ್ತು ಹಂತಗಳು (ಒಟ್ಟು 8 ಹಂತಗಳು) ಕಾಣಿಸುತ್ತವೆ.
- ಸ್ವರಗಳ ಕ್ರಮಕ್ಕೆ (ಅ → ಆ → ಇ →) ಅನುಗುಣವಾಗಿ ಸರಿಯಾದ ಹಾದಿಯಲ್ಲಿ ಜೋಡಿಸುತ್ತ ಪಝಲ್ ಪೂರ್ಣಗೊಳಿಸಬೇಕು. (ಎಲ್ಲಾ ಕೋಣೆಗಳು ಭರ್ತಿ ಆಗಿರಬೇಕು.)
- ಟೈಮರ್ ಮೂಲಕ ಎಷ್ಟು ವೇಗವಾಗಿ ಪೂರ್ಣಗೊಳಿಸಿದ್ದೀರಿ ಎಂದು ಗಮನಿಸಬಹುದು; ತಪ್ಪಾದರೆ Reset ಬಟನ್ ಒತ್ತಿ ಮತ್ತೆ ಆರಂಭಿಸಬಹುದು.
ಇದರ ವಿಶೇಷತೆಗಳು:
- ಕನ್ನಡ ಕಲಿಯಲು ಸಹಾಯಕ: ಮಕ್ಕಳಿಗೆ ಮತ್ತು ಹೊಸ ಕನ್ನಡ ಕಲಿಯುವವರಿಗೆ ಆಟದ ಮೂಲಕ ಸ್ವರಗಳ ಗುರುತಿಸುವಿಕೆ ಮತ್ತು ಕ್ರಮವನ್ನು ಸುಲಭವಾಗಿ ಕಲಿಸುತ್ತದೆ.
- 8 ಹಂತಗಳ ಸವಾಲು: ಸರಳ ಹಂತದಿಂದ ಆರಂಭವಾಗಿ ಮುಂದಿನ ಹಂತಗಳಲ್ಲಿ ಕುತೂಹಲ ಅನುಭವ ನೀಡುತ್ತದೆ.
- ವೇಗ ಮತ್ತು ಸುಲಭ ಬಳಕೆ: ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲದೆ ಬ್ರೌಸರ್‌ನಲ್ಲೇ ನೇರವಾಗಿ ಆಡಬಹುದು.












