ಚಿತ್ರ ಕಥೆ ಬರೆಯಿರಿ (chitra kathe bareyiri) – 10 ಚಿತ್ರಗಳನ್ನು ನೋಡಿ ನಿಮ್ಮದೇ ಸ್ವಂತ ಕಥೆಯನ್ನು ರಚಿಸಿ.
ಕೆಳಗಿನ 10 ಚಿತ್ರಗಳನ್ನು ನೋಡಿ. ಪ್ರತಿ ಚಿತ್ರ ನೋಡಿದಾಗ ನಿಮಗೆ ಏನು ಅನಿಸುತ್ತದೆ ಎಂದು ಕೆಳಗೆ ಬರೆಯಿರಿ. ಕೊನೆಗೆ ನೀತಿ ಪಾಠವನ್ನೂ ಬರೆಯಿರಿ. ನಂತರ ನಿಮ್ಮ ಕಥೆ ಮತ್ತು ನಿಜವಾದ ಕಥೆಯನ್ನು ಹೋಲಿಸಿ ನೋಡಿ. ನಿಮಗೊಂದು ಬಿರುದೂ ಸಿಗುತ್ತದೆ!
ಪ್ರತಿಯೊಬ್ಬರಿಗೂ ಕಥೆ ಬರೆಯುವ ಮತ್ತು ಕಥೆ ಹೇಳುವ ಹವ್ಯಾಸ ಇರುತ್ತದೆ. ಮನೆಯಲ್ಲಿ ಅಜ್ಜಿ, ತಾತ ಹೇಳುವ ಕಥೆಗಳು ಮಕ್ಕಳಿಗೆ ಎಲ್ಲಿಲ್ಲದ ಸಂತೋಷವನ್ನು ನೀಡುತ್ತವೆ. ನಮ್ಮ ಕಲ್ಪನೆಯಿಂದ ಮೂಡಿಬರುವ ಕಥೆಗಳು ಯಾವಾಗಲೂ ವಿಭಿನ್ನವಾಗಿರುತ್ತವೆ. ಕೆಲವೊಮ್ಮೆ ಕೆಲವು ಕುತೂಹಲಕಾರಿ ದೃಶ್ಯಗಳನ್ನು ನೋಡಿದಾಗ, “ಈ ಕಥೆ ಹೀಗಿದ್ದರೆ ಎಷ್ಟು ಚೆಂದ!” ಎಂಬ ಕಲ್ಪನಾ ಲೋಕಕ್ಕೆ ಜಾರುತ್ತೇವೆ. ಅಲ್ಲಿಂದಲೇ ಹೊಸದೊಂದು ಕಥೆಯ ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ಕನಸಿನಲ್ಲೂ ಕಥೆಗಳು ಹುಟ್ಟಿಕೊಳ್ಳುವುದುಂಟು.
ಮಕ್ಕಳಿಗೆ ಕಥೆ ಹೇಳುವಾಗ ಅವರ ಸಂಪೂರ್ಣ ಏಕಾಗ್ರತೆ ಕಥೆಯ ಪಾತ್ರಗಳ ಮೇಲಿರುತ್ತದೆ. ನಾವು ಯಾವ ಪಾತ್ರವನ್ನು ಹೆಚ್ಚು ರೋಚಕವಾಗಿ ವಿವರಿಸುತ್ತೇವೋ, ಅದೇ ಪಾತ್ರವು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ಹಾಗೆಯೇ, ಪ್ರತಿಯೊಬ್ಬರ ಒಳಗೂ ಒಬ್ಬ ಕಥೆಗಾರ ಇರುತ್ತಾನೆ. ಪದಗಳನ್ನು ಸುಂದರವಾಗಿ ಪೋಣಿಸುವ ಕಲೆ ಎಲ್ಲರಲ್ಲೂ ಇರುತ್ತದೆ. ಇಂದಿನ ಧಾವಂತದ ಜೀವನದಲ್ಲೂ ಸ್ವಲ್ಪ ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಮಾತನಾಡುವುದು, ಅವರಿಗೆ ಕಥೆಗಳನ್ನು ಹೇಳುವುದು ಮುಖ್ಯ. ಒಂದು ಚಿತ್ರವನ್ನು ತೋರಿಸಿ “ಇದರ ಬಗ್ಗೆ ನಿನ್ನ ಅಭಿಪ್ರಾಯವೇನು?” ಎಂದು ಕೇಳಿದಾಗ, ಆ ಮಗುವಿನ ಕಲ್ಪನಾ ಶಕ್ತಿ ಎಂಥದ್ದು ಎಂಬುದು ನಮಗೆ ತಿಳಿಯುತ್ತದೆ. ಕೆಲವೊಮ್ಮೆ ಹಿರಿಯರಿಗೂ ಹೊಳೆಯದ ಅಪರೂಪದ ವಿಷಯಗಳನ್ನು ಪುಟಾಣಿಗಳು ಹೇಳಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಆದ್ದರಿಂದ, ಮಕ್ಕಳಿಗೆ ನೀತಿ ಪಾಠದ ಒಳ್ಳೆಯ ಕಥೆಗಳನ್ನು ಹೇಳಬೇಕು.
ಇದೇ ನಿಟ್ಟಿನಲ್ಲಿ witzone.in ವತಿಯಿಂದ ಒಂದು ಸಣ್ಣ ಪ್ರಯತ್ನ ಮಾಡಲಾಗಿದೆ:
ಇಲ್ಲಿ ನೀಡಲಾಗಿರುವ 10 ಚಿತ್ರಗಳನ್ನು ನೋಡಿ, ಆ ಚಿತ್ರದಲ್ಲಿ ಏನು ನಡೆಯುತ್ತಿದೆ? ವ್ಯಕ್ತಿಗಳ ಮುಖದ ಭಾವನೆಗಳು ಹೇಗಿವೆ? ಅಲ್ಲಿನ ಪರಿಸರ ಹೇಗಿದೆ? ಎಂಬುದನ್ನೆಲ್ಲ ಗಮನಿಸಿ ನಿಮ್ಮದೇ ಆದ ಸ್ವಂತ ಪದಗಳಲ್ಲಿ ಕಥೆಯನ್ನು ಬರೆಯಿರಿ. ಎಲ್ಲಾ 10 ಚಿತ್ರಗಳಿಗೆ ಬರೆದು ಮುಗಿದ ನಂತರ ಒಂದು ಅರ್ಥಪೂರ್ಣ ನೀತಿ ಪಾಠವನ್ನು ಬರೆಯಬೇಕು.
ಕೊನೆಯಲ್ಲಿ ನಿಮ್ಮ ಹೆಸರು ಹಾಕಿ ಫಲಿತಾಂಶವನ್ನು ನೋಡಿದಾಗ, ನೀವು ಬರೆದ ಕಥೆ ಮತ್ತು ಅಲ್ಲಿರುವ ನಿಜವಾದ ಕಥೆಗೂ ಇರುವ ಸಾಮ್ಯತೆಯನ್ನು ಹೋಲಿಸಿ ನೋಡಬಹುದು. ಅಷ್ಟೇ ಅಲ್ಲ, ನಿಮ್ಮ ಪ್ರೋತ್ಸಾಹಕ್ಕಾಗಿ ವಿಶೇಷ ಬಿರುದು ಕಾರ್ಡ್ (Badge Card) ದೊರೆಯುತ್ತದೆ. ಇದನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಹುದು.
ಇದು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ, ಕಥೆ ಬರೆಯುವ ಉತ್ಸಾಹವನ್ನು ಹೆಚ್ಚಿಸಿ ನಿಮ್ಮೊಳಗಿನ ನೈಜ ಕಥೆಗಾರನನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ ಕನ್ನಡ ಪದಗಳ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಪ್ರತಿಯೊಬ್ಬರ ಕಲ್ಪನೆಯೂ ವಿಶೇಷ!. ಮುಂದಿನ ದಿನಗಳಲ್ಲಿ ಇದೇ ರೀತಿಯ ಇನ್ನೂ ಹಲವಾರು ಕುತೂಹಲಕಾರಿ ವಿಷಯಗಳನ್ನು ‘ಚಿತ್ರ ಕಥೆ’ಯ ಮೂಲಕ ನಿಮ್ಮ ಮುಂದೆ ತರುತ್ತೇವೆ. ಎಲ್ಲರಿಗೂ ಒಳ್ಳೆಯದಾಗಲಿ!
ನೀವು ಬರೆದ ಕಥೆಗೆ ಯಾವ ಬಿರುದು ಸಿಗಲಿದೆ ಎಂದು ಇಲ್ಲಿ ಪರೀಕ್ಷಿಸಿ!
ಕೆಳಗಿನ 10 ಚಿತ್ರಗಳನ್ನು ನೋಡಿ. ಪ್ರತಿ ಚಿತ್ರ ನೋಡಿದಾಗ ನಿಮಗೆ ಏನು ಅನಿಸುತ್ತದೆ ಎಂದು ಕೆಳಗೆ ಬರೆಯಿರಿ. ಕೊನೆಗೆ ನೀತಿ ಪಾಠವನ್ನೂ ಬರೆಯಿರಿ. ನಂತರ ನಿಮ್ಮ ಕಥೆ ಮತ್ತು ನಿಜವಾದ ಕಥೆಯನ್ನು ಹೋಲಿಸಿ ನೋಡಿ. ನಿಮಗೊಂದು ಬಿರುದೂ ಸಿಗುತ್ತದೆ!
