
“ಕನ್ನಡ ರಾಜ್ಯೋತ್ಸವ ವಿಶೇಷ: ‘ಕನ್ನಡ ಅಕ್ಷರ ಹೆಜ್ಜೆ’ – ‘ಕನ್ನಡ’ ಅಕ್ಷರವನ್ನು ಗೆರೆಗಳ ಮೂಲಕ ಸುಲಭವಾಗಿ ಬರೆಯುವ ಆಕರ್ಷಕ ಇಂಟರಾಕ್ಟಿವ್ ಪಝಲ್ ಗೇಮ್. (witzone) ವಿಟ್ ಜೋನ್‌ನಲ್ಲಿ ಈಗಲೇ ಆಡಿ!”
ಕನ್ನಡ ಅಕ್ಷರ ಹೆಜ್ಜೆ (Kannada Akshara Hejje) Game
ಸಂಖ್ಯೆ 1 ಚುಕ್ಕೆಯಿಂದ ಗೆರೆ ಎಳೆದು ಪ್ರಾರಂಭಿಸಿ, ಪ್ರತಿ ಗೆರೆಯನ್ನು ಸಂಖ್ಯೆಗಳ ಕ್ರಮದಲ್ಲಿ ಎಳೆಯುತ್ತಾ ಸಾಗಿದಾಗ ಅಲ್ಲಿ ಹಳದಿ ಮತ್ತು ಕೆಂಪು ಬಣ್ಣ ತುಂಬಿಕೊಳ್ಳುತ್ತದೆ. ಅಕ್ಷರಗಳನ್ನು ಆಟದ ಮೂಲಕವೇ ಕಲಿಯಲು ಇದೊಂದು ಸುಂದರವಾದ ಇಂಟರಾಕ್ಟಿವ್ ಒಗಟು ಆಟವಾಗಿದೆ.
ಆಡುವ ವಿಧಾನ: 1ನೇ ನಂಬರ್ ಚುಕ್ಕೆಯಿಂದ ಟಚ್ ಮಾಡಿ ಅಥವಾ ಮೌಸ್ ನಿಂದ ಡ್ರ್ಯಾಗ್ ಮಾಡುತ್ತಾ ಮುಂದಿನ ಸಂಖ್ಯೆಗಳಿಗೆ ಗೆರೆ ಎಳೆಯಿರಿ..
ವಿಶೇಷತೆ: ಇದು ಕನ್ನಡ ರಾಜ್ಯೋತ್ಸವಕ್ಕೆ ಎಲ್ಲ ಕನ್ನಡಿಗರಿಗಾಗಿ ಮಾಡಿರುವ ಒಂದು ಸರಳ ಅಕ್ಷರ ಬರೆಯುವ ಆಟ. ಒಂದು ಅಕ್ಷರ ಬರೆಯುವಾಗ ಅದಕ್ಕೆ ಒಂದು ನಿಯಮ, ಶಿಸ್ತು ಇದ್ದಾಗ ಅದು ಸಂಪೂರ್ಣವಾಗುತ್ತದೆ. ಒಂದೊಂದೇ ಅಕ್ಷರಗಳನ್ನು ಜೋಡಿಸುತ್ತಾ ಹೋದಾಗ ಒಂದು ಪದ ಸೃಷ್ಟಿಯಾಗುತ್ತದೆ. ಪ್ರತಿ ಅಕ್ಷರ ಬರೆಯುವಾಗ ಹೇಗೆ ಆರಂಭ ಮಾಡಬೇಕು ಮತ್ತು ಹೇಗೆ ಕೊನೆಗೊಳಿಸಬೇಕು ಎಂದು ಕ್ರಮ ಇರುತ್ತದೆ. ಇದರಿಂದ ಬರವಣಿಗೆ ಸುಲಭ ಮತ್ತು ಸುಂದರವಾಗಿರುತ್ತದೆ. ಅಕ್ಷರದಲ್ಲಿರುವ ಒತ್ತಕ್ಷರ, ಕೊಂಬಿನಾಕಾರದ ಗೆರೆಗಳು, ದೀರ್ಘ ಗೆರೆಗಳು ಇದೆಲ್ಲ ಸರಿಯಾದ ಪ್ರಮಾಣದಲ್ಲಿದ್ದಾಗ ಮಾತ್ರ ಅಕ್ಷರದ ಸರಿಯಾದ ರೂಪ ಪಡೆಯುತ್ತದೆ. ಹಾಗಾಗಿ ಹೆಸರಿನಲ್ಲಿ “ಹೆಜ್ಜೆ” ಅಂತ ಸೇರಿಸಿದ್ದೇವೆ.
ಇಲ್ಲಿ ಈ ಕನ್ನಡ ಅಕ್ಷರ ಹೆಜ್ಜೆ ಆಟದಲ್ಲಿ ಕರ್ನಾಟಕದ ಬಾವುಟ ಬಣ್ಣ ಹಳದಿ ಮತ್ತು ಕೆಂಪು ಬಣ್ಣ ಅಕ್ಷರದಲ್ಲಿ ಸೇರಿಸಿರುವುದರಿಂದ ಸಂಖ್ಯೆಗಳನ್ನು 1 ರಿಂದ 2, 1 ರಿಂದ 3, 1 ರಿಂದ 4, 1 ರಿಂದ 6 ಈ ರೀತಿ ವಿಭಜಿಸಿ ಮಾಡಬೇಕಾಯಿತು.
ಈ ಆಟ ದಲ್ಲಿ 4 ಹೆಜ್ಜೆಗಳಿವೆ. ಹೆಜ್ಜೆ 1 – ‘ಕ’ ಅಕ್ಷರ, ಹೆಜ್ಜೆ 2 – ‘ನ್ನ’ ಅಕ್ಷರ, ಹೆಜ್ಜೆ 3 – ‘ಡ’ ಅಕ್ಷರ, ಕೊನೆಯ ಹೆಜ್ಜೆ 4 – ‘ಕನ್ನಡ’ ಪದ ಜೋಡಣೆ.
ಇದೊಂದು ಸಣ್ಣ ಪ್ರಯತ್ನ. ನಿಮಗಿದು ಇಷ್ಟ ಆದಲ್ಲಿ ಲೈಕ್ ಕೊಡಿ, ಮತ್ತು ಸ್ಟಾರ್ ಕೊಡಿ. ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಹಂಚಿ ಬೆಂಬಲ ನೀಡಿ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಜೈ ಕರ್ನಾಟಕ ಮಾತೆ!