ಕನ್ನಡ ಸಾಹಿತ್ಯದಲ್ಲಿ ಕನ್ನಡಕ್ಕೆ ಹೆಸರು ತಂದುಕೊಟ್ಟ ಮೊದಲಿಗರು, ಕವಿಗಳು ಮತ್ತು ಸಾಹಿತಿಗಳು ಹಲವಾರು ಇದ್ದಾರೆ. ನೂರಾರು ಕೃತಿ ಹಾಗೂ ಕಾದಂಬರಿಗಳನ್ನು ರಚಿಸಿ, ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ವಿವಿಧ ಮನ್ನಣೆಗಳನ್ನು ಗಳಿಸಿರುವ ಕವಿಗಳು ನಮ್ಮ ಕನ್ನಡ ನಾಡಿನ ಹೆಮ್ಮೆ.
ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ, ನಮ್ಮ ನಾಡು ಮತ್ತು ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಈ ಕನ್ನಡ ಸಾಹಿತ್ಯ ರಸಪ್ರಶ್ನೆಯು (Kannada Sahitya Quiz) ನಿಮ್ಮ ಜ್ಞಾನವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಕನ್ನಡ ನಾಡು-ನುಡಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು! ಜೈ ಕರ್ನಾಟಕ ಮಾತೆ.
ಇಲ್ಲಿ 10 ಪ್ರಶ್ನೆಗಳಿವೆ ಜೊತೆಗೆ ಪ್ರತಿ ಪ್ರಶ್ನೆಗೆ 4 ಸುಳಿವುಗಳಿವೆ. ಎಲ್ಲ 10 ಪ್ರಶ್ನೆಗಳಿಗೆ ಉತ್ತರ ಕೊಟ್ಟ ನಂತರ finish ಬಟನ್ ಒತ್ತಿದಾಗ ಎಷ್ಟು ಸರಿ ಉತ್ತರ ಕೊಟ್ಟಿದ್ದೀರಿ ಅಂತ ತೋರಿಸುತ್ತದೆ. ಮತ್ತು ಸರಿ ಉತ್ತರ ಜೊತೆಗೆ ಸಣ್ಣ ವಿವರಣೆ ತೋರಿಸುತ್ತದೆ.
Results
#1. ಕನ್ನಡದ ವರಕವಿ ಯಾರು ?
ಕನ್ನಡದ ವರಕವಿ ಎಂದು ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ) ಅವರನ್ನು ಕರೆಯಲಾಗುತ್ತದೆ. ಇವರು ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು.ಇವರ ‘ನಾಕು ತಂತಿ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅಲ್ಲದೆ ಪದ್ಮಶ್ರೀ ಪ್ರಶಸ್ತಿ ಹಾಗೂ ಸಾಹಿತ್ಯ ಅಕಾಡೆಮಿ ಗೌರವವೂ ಲಭಿಸಿದೆ.
#2. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?
ಡಾ. ಕೆ.ವಿ. ಪುಟ್ಟಪ್ಪ ಅವರನ್ನು ಕುವೆಂಪು ಎಂದು ಕರೆಯಲಾಗುತ್ತದೆ. ಅವರು 20ನೇ ಶತಮಾನದ ಅತ್ಯಂತ ಶ್ರೇಷ್ಠ ಕನ್ನಡ ಕವಿ, ಕಾದಂಬರಿಕಾರ ಮತ್ತು ಚಿಂತಕರಾಗಿದ್ದರು.
• ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಬರಹಗಾರರು (ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕಾಗಿ).
• ಕರ್ನಾಟಕ ಸರ್ಕಾರದಿಂದ ‘ರಾಷ್ಟ್ರಕವಿ’ ಗೌರವ.
• ಕರ್ನಾಟಕ ರತ್ನ – ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ.
#3. ಕರ್ನಾಟಕದ ಪ್ರಥಮ ಸಂಗೀತ ಗುರು ಯಾರು ?
ಶ್ರೀ ಪುರಂದರದಾಸರು – ಇವರನ್ನು ಕರ್ನಾಟಕ ಸಂಗೀತದ ಮೂಲ ಗುರು ಅಥವಾ “ಕರ್ನಾಟಕ ಸಂಗೀತ ಪಿತಾಮಹ” ಎಂದು ಕರೆಯಲಾಗುತ್ತದೆ. ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಸಂಗೀತ ಕಲಿಯುವ ಆರಂಭಿಕ ಹಂತಗಳಾದ ಸರಳೆವರಸೆ, ಜಂಟಿವರಸೆ, ಅಲಂಕಾರಗಳು ಮತ್ತು ಪಿಳ್ಳಾರಿ ಗೀತೆಗಳನ್ನು ಇವರೇ ರೂಪಿಸಿಕೊಟ್ಟರು.
#4. “ಕನ್ನಡದ ಕಣ್ವ” ಎಂದು ಹೆಸರು ಪಡೆದಿರುವ ಕನ್ನಡ ಸಾಹಿತಿ ಯಾರು ?
ಇವರ ಪೂರ್ಣ ಹೆಸರು: ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ (ಬಿ.ಎಂ.ಶ್ರೀ)
ಕನ್ನಡ ಸಾಹಿತ್ಯ ಲೋಕದಲ್ಲಿ ಬಿ. ಎಂ. ಶ್ರೀಕಂಠಯ್ಯ (ಬಿ.ಎಂ.ಶ್ರೀ) ಇವರನ್ನು ‘ಹೊಸಗನ್ನಡದ ಹರಿಕಾರ’ ಹಾಗೂ ‘ಕನ್ನಡದ ಕಣ್ವ’ ಎಂದು ಅಭಿಮಾನದಿಂದ ಕರೆಯಲಾಗುತ್ತದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಉಳಿವಿಗಾಗಿ ಹಾಗೂ ಬೆಳವಣಿಗೆಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.
#5. ಅತೀ ಹೆಚ್ಚು ಪತ್ತೇದಾರಿ ಕೃತಿ ರಚನೆ ಮಾಡಿದ ಕನ್ನಡದ ಲೇಖಕ ಯಾರು ?
ಎನ್.ನರಸಿಂಹಯ್ಯನವರನ್ನು ಕನ್ನಡದ ಪತ್ತೇದಾರಿ ಕಾದಂಬರಿ ಗಳ ಜನಕನೆನ್ನಬಹುದು. ‘ಸುಪ್ರಸಿದ್ಧ ಪತ್ತೇದಾರಪುರುಷೋತ್ತಮನ ಸಾಹಸ’ವೆಂಬ ಮಾಲಿಕೆಯ ಅಡಿಯಲ್ಲಿ ನೂರಾರು ಪತ್ತೇದಾರಿ ಕಥೆಗಳನ್ನು ಹೆಣೆದು ಒಬ್ಬ ಜನಪ್ರಿಯ ಲೇಖಕರಾಗಿದ್ದಾರೆ.
#6. ‘ಅಭಿನವ ಪಂಪ’ ಎಂದು ಕರೆದುಕೊಂಡ ಕವಿ ಯಾರು ?
‘ಅಭಿನವ ಪಂಪ’ ಎಂದು ಕರೆದುಕೊಂಡ ಕವಿ ನಾಗಚಂದ್ರ.
ನಾಗಚಂದ್ರ (ಕ್ರಿ.ಶ. 1100): ಪಂಪನ ‘ವಿಕ್ರಮಾರ್ಜುನ ವಿಜಯ’ಕ್ಕೆ (ಪಂಪ ಭಾರತ) ಪ್ರತಿಯಾಗಿ ಜೈನ ಸಂಪ್ರದಾಯದ ರಾಮಾಯಣವಾದ ‘ರಾಮಚಂದ್ರ ಚರಿತ ಪುರಾಣ’ (ಪಂಪ ರಾಮಾಯಣ) ಬರೆದು ತಾವೇ ಸ್ವತಃ ‘ಅಭಿನವ ಪಂಪ’ (ಹೊಸ ಪಂಪ) ಎಂದು ಕರೆದುಕೊಂಡರು.
#7. ಕನ್ನಡದ ಮೊದಲ ಉಪಲಬ್ಧ ಕೃತಿ ಯಾವುದು ?
ಕನ್ನಡದ ಮೊದಲ ಉಪಲಬ್ಧ ಕೃತಿ (ಗ್ರಂಥ) ‘ಕವಿರಾಜಮಾರ್ಗ’.
ರಚನಾಕಾರರು ಶ್ರೀವಿಜಯ (ಅಥವಾ ರಾಷ್ಟ್ರಕೂಟ ದೊರೆ ನೃಪತುಂಗ ಅಮೋಘವರ್ಷ).
ಕಾಲ: ಕ್ರಿ.ಶ. ೮೫೦ ರ ಸುಮಾರಿಗೆ (೯ನೇ ಶತಮಾನ).
ಇದು ಕನ್ನಡದ ಪ್ರಥಮ ಉಪಲಬ್ಧ ಕಾವ್ಯ ಹಾಗೂ ಲಕ್ಷಣ ಗ್ರಂಥ (ಇದು ಕಾವ್ಯ ಬರೆಯುವ ಬಗ್ಗೆ ಮಾರ್ಗದರ್ಶನ ನೀಡುವ ಕೈಪಿಡಿ).
#8. ಕನ್ನಡ ಮೊದಲ ಕವಿಯತ್ರಿ ಯಾರು ?
ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ. 12ನೇ ಶತಮಾನದ ಶರಣೆ ಮತ್ತು ವಚನಕಾರರಾದ ಇವರು ಕನ್ನಡದ ಪ್ರಥಮ ಕವಯಿತ್ರಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.
#9. ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಅಧ್ಯಕ್ಷರು ಯಾರು ?
ಕನ್ನಡ ಸಾಹಿತ್ಯ ಸಮ್ಮೇಳನದ (ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ) ಮೊದಲ ಅಧ್ಯಕ್ಷರು ಹೆಚ್. ವಿ. ನಂಜುಂಡಯ್ಯ (ಹೊಸೂರು ವೆಂಕಟರಾಣಪ್ಪ ನಂಜುಂಡಯ್ಯ). ಸ್ಥಾಪನೆ/ವರ್ಷ: ಮೇ 3, 1915, ಮೊದಲ ಸಮ್ಮೇಳನ ನಡೆದ ಸ್ಥಳ: ಬೆಂಗಳೂರು ಸ್ಥಾಪಕರು/ಪೋಷಕರು: ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ. ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ಇದು ಆರಂಭವಾಯಿತು.
#10. ಕನ್ನಡ ಸಾಹಿತ್ಯದಲ್ಲಿ ‘ಚುಟುಕು ಬ್ರಹ್ಮ’ ಎಂದು ಹೆಸರು ಗಳಿಸಿದ ಕವಿ ಯಾರು ?
ಕನ್ನಡ ಸಾಹಿತ್ಯದಲ್ಲಿ ದಿನಕರ ದೇಸಾಯಿ ಅವರನ್ನು ‘ಚುಟುಕು ಬ್ರಹ್ಮ’ ಎಂದು ಕರೆಯಲಾಗುತ್ತದೆ.
ಅವರು ವಿಶಿಷ್ಟ ಶೈಲಿಯ ನಾಲ್ಕು ಸಾಲುಗಳ ಪದ್ಯಗಳ (ಚುಟುಕುಗಳು) ಮೂಲಕ ಸಮಾಜದ ವಿಡಂಬನೆ ಮತ್ತು ಹಾಸ್ಯವನ್ನು ಅತ್ಯಂತ ಮಾರ್ಮಿಕವಾಗಿ ತಿಳಿಸಿದ್ದಾರೆ.



