Telegram Join Telegram

Witzone ಡಿಜಿಟಲ್ ದೀಪಾವಳಿ ಸಂಭ್ರಮ! | Deepavali Sambhrama Game

Deepavali Sambhrama Game – ವಿಟ್ ಝೋನ್ (Witzone.in) ತಂದಿರುವ ವಿಶೇಷ ದೀಪಾವಳಿ ಗೇಮ್ ‘ದೀಪಾವಳಿ ಸಂಭ್ರಮ’. 4 ವಿಭಿನ್ನ ಹಂತಗಳ ಈ ಆಕರ್ಷಕ ಆಟವನ್ನು ಆಡಿ, ದೀಪ ಹಚ್ಚಿ, ಪಟಾಕಿ ಸಿಡಿಸಿ ಹಬ್ಬವನ್ನು ಆಚರಿಸಿ! ಇದು Witzone ಡಿಜಿಟಲ್ ದೀಪಾವಳಿ ಸಂಭ್ರಮ! ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಮೊದಲು ಈ ದೀಪಾವಳಿಯ ಬಗ್ಗೆ ತಿಳಿಯೋಣ! ನಂತರ ದೀಪಾವಳಿ ಗೇಮ್ ಆಡಿ.

ದೀಪಾವಳಿಯ ಹೆಸರು ಹೇಗೆ ಬಂತು ? ‘ದೀಪ’ ಅಂದರೆ ಹಣತೆ ಅಥವಾ ಬೆಳಕು. ‘ಅವಳಿ’ ಅಥವಾ ‘ಆವಳಿ’ ಅಂದರೆ ಸಾಲು ಅಥವಾ ಗುಂಪು. ಅಂದರೆ, ಸಾಲಾಗಿ ಅಥವಾ ಒಟ್ಟಾಗಿ ಹಣತೆಗಳನ್ನು ಹಚ್ಚಿ ಆಚರಿಸುವ ಹಬ್ಬವೇ ‘ದೀಪಾವಳಿ’. ಸಂಸ್ಕೃತ ಪದವಾದ “ದೀಪಾವಳಿ” (Deepavali) ಅಥವಾ “ದೀಪಾವಲಿಕಾ” ಎಂಬ ಶಬ್ದದಿಂದ ಬಂದಿದೆ. ಸಾಲಿನಿಂದ ಕೂಡಿದ ದೀಪಗಳ ಹಬ್ಬವಾಗಿರುವುದರಿಂದ ಮತ್ತು ಕತ್ತಲೆಯನ್ನು ಹೋಗಲಾಡಿಸಿ, ಬೆಳಕನ್ನು ಹರಡುವ ಹಬ್ಬವಾಗಿದೆ.

ಉತ್ತರ ಭಾರತದಲ್ಲಿ ಇದನ್ನು ಕೆಲವರು ‘ದೀಪಾವಲಿ’ ಅಥವಾ ‘ದಿವಾಲಿ’ ಎಂದು ಕರೆಯುತ್ತಾರೆ. ನಮ್ಮಲ್ಲಿ ಅಂದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಇದನ್ನು ‘ದೀಪಾವಳಿ’ ಎಂದೇ ಕರೆಯಲಾಗುತ್ತದೆ.

ದೀಪಾವಳಿ ಹಬ್ಬದ ಹಲವಾರು ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಗಳಿವೆ.

ಶ್ರೀರಾಮಚಂದ್ರ ವನವಾಸದಿಂದ ಅಯೋಧ್ಯೆಗೆ ಮರಳಿದ ದಿನ

ದೀಪಾವಳಿಯ ಕುರಿತಾದ ಅತ್ಯಂತ ಪ್ರಮುಖವಾದ ಕಥೆಯೆಂದರೆ ರಾಮಾಯಣಕ್ಕೆ ಸಂಬಂಧಿಸಿದ್ದು. ಶ್ರೀರಾಮನು ಸೀತಾ ದೇವಿ ಮತ್ತು ಲಕ್ಷ್ಮಣನೊಂದಿಗೆ 14 ವರ್ಷಗಳ ವನವಾಸವನ್ನು ಮುಗಿಸಿ, ರಾವಣನನ್ನು ವಧಿಸಿ ಅಯೋಧ್ಯೆಗೆ ಮರಳಿದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ರಾಮನು ಅಯೋಧ್ಯೆಗೆ ಬರುವ ಸಂತೋಷಕ್ಕೆ, ಅಯೋಧ್ಯೆಯ ನಾಗರಿಕರು ತಮ್ಮ ಇಡೀ ನಗರವನ್ನು ಮಣ್ಣಿನ ಹಣತೆಗಳನ್ನು ಹಚ್ಚಿ ಸ್ವಾಗತಿಸಿದರು. ಅಂದಿನಿಂದ ಪ್ರತಿವರ್ಷ ಕತ್ತಲೆಯನ್ನು ಕಳಚಿ ಬೆಳಕನ್ನು ತರುವ ಸಂಕೇತವಾಗಿ ದೀಪ ಹಚ್ಚಿ ಈ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನರಕಾಸುರ ವಧೆ

ನರಕಾಸುರನೆಂಬ ಕ್ರೂರ ರಾಕ್ಷಸನನ್ನು ಶ್ರೀಕೃಷ್ಣ, ಸತ್ಯಭಾಮೆ ಮತ್ತು ಇಂದ್ರ ಜತೆಯಾಗಿ ವಧಿಸಿದ ದಿನವನ್ನು ‘ನರಕ ಚತುರ್ದಶಿ’ಯಾಗಿ ಆಚರಿಸಲಾಗುತ್ತದೆ. ನರಕಾಸುರನ ಹತ್ಯೆಯಿಂದ ಜನರಿಗೆ ಆತನ ಕಾಟದಿಂದ ಮುಕ್ತಿ ಸಿಕ್ಕಿತು. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ವಿಜಯದ ಸಂಕೇತವಾಗಿ ಅಂದು ಮುಂಜಾನೆ ಎಣ್ಣೆಸ್ನಾನ ಮಾಡಿ, ದೀಪಗಳನ್ನು ಹಚ್ಚಿ ಸಂಭ್ರಮಿಸಲಾಗುತ್ತದೆ.

ಪಾಂಡವರು ವನವಾಸದಿಂದ ಮುಕ್ತರಾದರು

ಪಾಂಡವರು ತಮ್ಮ ಹದಿಮೂರು ವರ್ಷಗಳ ವನವಾಸವನ್ನು (ಒಂದು ವರ್ಷದ ಅಜ್ಞಾತವಾಸ ಸೇರಿದಂತೆ) ಯಶಸ್ವಿಯಾಗಿ ಪೂರೈಸಿ ದೀಪಾವಳಿಯ ದಿನದಂದು ಹಸ್ತಿನಾಪುರಕ್ಕೆ ಮರಳಿದರು. ಪಾಂಡವರ ಆಗಮನವನ್ನು ಸ್ವಾಗತಿಸಲು ಹಸ್ತಿನಾಪುರದ ಜನರು ದೀಪಗಳನ್ನು ಬೆಳಗಿ ಸಂತೋಷದಿಂದ ಸಂಭ್ರಮಿಸಿದರು.

ಮಹಾಲಕ್ಷ್ಮಿ ಪೂಜೆ (ಐಶ್ವರ್ಯದ ಹಬ್ಬ)

ದೀಪಾವಳಿಯ ದಿನದಂದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದಳು. ಉತ್ತರ ಭಾರತದಲ್ಲಿ ಆ ದಿನದಂದು ಮನೆಗಳಿಗೆ ಲಕ್ಷ್ಮಿ ದೇವಿಯು ಪ್ರವೇಶಿಸುತ್ತಾಳೆ ಎಂಬ ನಂಬಿಕೆಯಿಂದ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಿ, ಮನೆಗಳನ್ನು ಸ್ವಚ್ಛಗೊಳಿಸಿ ದೀಪಗಳಿಂದ ಅಲಂಕರಿಸಲಾಗುತ್ತದೆ.

ಭಾರತದಾದ್ಯಂತ ಈ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ.

ದೀಪ ಹಚ್ಚಿ, ಪಟಾಕಿ ಸಿಡಿಸಿ! ಆಕರ್ಷಕ ಆಟವನ್ನು ಆಡಿ!

How useful was this post?

Click on a star to rate it!

Average rating 5 / 5. Vote count: 2

No votes so far! Be the first to rate this post.