Graphic Design ಮಾಡಿ Online Income ಗಳಿಸಿ | Work From Home Kannada Guide
ಇಂದಿನ ಡಿಜಿಟಲ್ ಯುಗದಲ್ಲಿ ಗ್ರಾಫಿಕ್ ಡಿಸೈನ್ ಕೌಶಲ್ಯ ಹೊಂದಿರುವವರಿಗೆ ಅನೇಕ ಆನ್‌ಲೈನ್ ಆದಾಯದ ಅವಕಾಶಗಳು ಲಭ್ಯವಿವೆ. ನೀವು ಪ್ರೊಫೆಷನಲ್ ಗ್ರಾಫಿಕ್ ಡಿಸೈನರ್ ಆಗಿರಬೇಕೆಂದೇನೂ ಇಲ್ಲ. ಸ್ವಲ್ಪ ಮಟ್ಟಿಗೆ ಡಿಸೈನ್ ತಿಳಿದಿದ್ದರೂ ಕೂಡ, ನೀವು ನಿಮ್ಮ ಬಿಡುವಿನ ಸಮಯದಲ್ಲಿ ಡಿಸೈನ್ ಮಾಡಿ ಮನೆಯಿಂದಲೇ ಹಣ ಸಂಪಾದಿಸಬಹುದು.
Contributor ಡಿಸೈನ್ ಅಂದ್ರೇನು?
Stock ವೆಬ್ ಸೈಟ್ ಗಳಲ್ಲಿ (Adobe Stock, Shutterstock ಮುಂತಾದವು) ಮಾರಾಟಕ್ಕೆ ಹಾಕುವ ಡಿಸೈನ್‌ಗಳನ್ನು contributor ಡಿಸೈನ್ ಎಂದು ಕರೆಯುತ್ತಾರೆ.
ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಹಣ ಸಂಪಾದಿಸಬಹುದು?
Adobe Stock, Shutterstock, Freepik, Vecteezy ಮುಂತಾದ ವೆಬ್ಸೈಟ್‌ಗಳು ಡಿಸೈನರ್‌ಗಳಿಗೆ ದೊಡ್ಡ ಅವಕಾಶವನ್ನು ನೀಡುತ್ತಿವೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ Contributor ಆಗಿ ಸೇರಿ ನಿಮ್ಮ ಡಿಸೈನ್‌ಗಳನ್ನು ಅಪ್ಲೋಡ್ ಮಾಡಬಹುದು. ಡಿಸೈನ್ ಮಾತ್ರ ಅಲ್ಲ ವಿಡಿಯೋ ಸಹ ಅಪ್ಲೋಡ್ ಮಾಡಬಹುದು. ನೀವು ಫೋಟೋಗ್ರಫಿಯಲ್ಲಿ ಆಸಕ್ತಿ ಇದ್ದರೆ ಫೋಟೋ ಅಪ್ಲೋಡ್ ಮಾಡಬಹುದು. ನೀವು ಹಾಕಿದ ಡಿಸೈನ್‌ಗಳನ್ನು ಜನರು ಡೌನ್‌ಲೋಡ್ ಮಾಡಿದಾಗ ನೀವು ಹಣ ಪಡೆಯುತ್ತೀರಿ.
ಆರಂಭದಲ್ಲಿ ಗಮನಿಸಬೇಕಾದ ಮುಖ್ಯ ವಿಷಯಗಳು
ಮೊದಲ ತಿಂಗಳಲ್ಲಿ ಅಥವಾ ಎರಡು ತಿಂಗಳಲ್ಲಿ ತಕ್ಷಣ ಆದಾಯ ಬರುತ್ತದೆ ಎಂದು ನಿರೀಕ್ಷಿಸಬೇಡಿ. ಈ ಕ್ಷೇತ್ರದಲ್ಲಿ ತಾಳ್ಮೆ ಬಹಳ ಮುಖ್ಯ. ಪ್ರಾರಂಭದಲ್ಲಿ ನಿಮ್ಮ ಗುರಿ — ಹೆಚ್ಚು ಡಿಸೈನ್‌ಗಳನ್ನು ಅಪ್ಲೋಡ್ ಮಾಡುವುದು ಆಗಿರಬೇಕು.
ಉದಾಹರಣೆಗೆ, ನೀವು ಪ್ರತಿ ದಿನ 10 ಡಿಸೈನ್ ಮಾಡಿದರೆ ತಿಂಗಳಿಗೆ ಸುಮಾರು 300 ಡಿಸೈನ್ ಆಗುತ್ತದೆ. ಈ ರೀತಿಯಾಗಿ ನಿರಂತರವಾಗಿ ಡಿಸೈನ್ ಅಪ್ಲೋಡ್ ಮಾಡುತ್ತಾ ಹೋದರೆ, ಕೆಲವು ದಿನಗಳ ನಂತರ ನಿಮ್ಮ ಡಿಸೈನ್‌ಗಳು ಡೌನ್‌ಲೋಡ್ ಆಗಲು ಪ್ರಾರಂಭವಾಗುತ್ತದೆ. ಹೆಚ್ಚು ಡಿಸೈನ್ ಇದ್ದರೆ ಹೆಚ್ಚು ಆದಾಯ ಸಾಧ್ಯ.
ಹೀಗೆ ನೀವು ಹೆಚ್ಚು ಡಿಸೈನ್ ಹಾಕುತ್ತಾ ಹೋದಂತೆ, ನಿಮ್ಮ ಡಿಸೈನ್‌ಗಳು ಹೆಚ್ಚು ಜನರಿಗೆ ಕಾಣಿಸುತ್ತವೆ ಮತ್ತು ಡೌನ್‌ಲೋಡ್‌ಗಳು ಹೆಚ್ಚಾಗುತ್ತವೆ.
ಇಲ್ಲಿದೆ contributor login link – click ಮಾಡಿ join ಆಗಿ, ನಿಮ್ಮ ಡಿಸೈನ್ ಅಪ್ಲೋಡ್ ಮಾಡಿ.
Shutterstock – Contributor
Adobe Stock – Contributor
Vecteezy – Contributor
Freepik (Magnific) – Contributor


AI ಬಳಸಿ ವೇಗವಾಗಿ ಡಿಸೈನ್ ಮಾಡಿ
ಇತ್ತೀಚಿನ ದಿನಗಳಲ್ಲಿ AI ಟೂಲ್‌ಗಳ ಸಹಾಯದಿಂದ ವೇಗವಾಗಿ ಮತ್ತು ಕ್ರಿಯೇಟಿವ್ ಡಿಸೈನ್‌ಗಳನ್ನು ಮಾಡಬಹುದು. ಇದು ನಿಮ್ಮ ಸಮಯವನ್ನು ಉಳಿಸುತ್ತದೆ ಮತ್ತು ಹೆಚ್ಚು ಡಿಸೈನ್ ಮಾಡಲು ಸಹಾಯ ಮಾಡುತ್ತದೆ. ಆದರೆ AI ಡಿಸೈನ್‌ಗಳಿಗೆ ಪ್ರತಿ ಪ್ಲಾಟ್‌ಫಾರ್ಮ್‌ನ ನಿಯಮಗಳನ್ನು ಸರಿಯಾಗಿ ಓದಿ ಅನುಸರಿಸಬೇಕು.
ಈಗ ತುಂಬಾ ಸುಲಭವಾಗಿ ಡಿಸೈನ್ ಮಾಡಲು ವೆಬ್ ಸೈಟ್ ಇವೆ. AI ಯಿಂದ ಡಿಸೈನ್ ಐಡಿಯಾ ಸಿಗುತ್ತದೆ ಮತ್ತು ಅದನ್ನು ನಮ್ಮ ಕಲ್ಪನೆಯಿಂದ ಡಿಸೈನ್ ಬದಲಾಯಿಸಬಹುದು. AI ಡಿಸೈನ್ ಎಲ್ಲವೂ ಸರಿ ಇರುವುದಿಲ್ಲ. ಆದರೆ ಅದರಿಂದ ಬಂದ ಡಿಸೈನ್ ಐಡಿಯಾ ಬಳಸಿ ನಾವು ಒಂದು ಹೊಸ ರೀತಿಯ ಡಿಸೈನ್ ಕ್ರಿಯೇಟ್ ಮಾಡಬಹುದು.
ಹೀಗಾಗಿ AI ಬಳಸಿ ಮಾಡಿದ ಡಿಸೈನ್ ಎಲ್ಲ ವೆಬ್ ಸೈಟ್ ನಲ್ಲಿ ಅದು approve ಆಗುವುದಿಲ್ಲ. ಕೆಲವೊಂದು ನಿಯಮಗಳನ್ನು ಕೊಟ್ಟಿರುತ್ತಾರೆ. ಅದನ್ನು ನಾವು ತಿಳಿದು ಅದಕ್ಕೆ ತಕ್ಕಂತೆ ಡಿಸೈನ್ ಮಾಡಬೇಕು.
Canva ಒಂದು ಜನಪ್ರಿಯ ಡಿಸೈನ್ ಟೂಲ್ ಆಗಿದೆ. ಡಿಸೈನ್ ಗೊತ್ತಿಲ್ಲದವರೂ ಸುಲಭವಾಗಿ ಕಲಿತು ಮಾಡಬಹುದು. ಇದರಲ್ಲಿ ನಿಮ್ಮದೇ ಒಂದು ಕಲ್ಪನೆಯ ವಿಡಿಯೋ ಕ್ರಿಯೇಟ್ ಮಾಡಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಬಹುದು. ಆದರೆ high quality ಆಗಿರಬೇಕು.
ಡಿಸೈನ್ ಹೇಗೆ ಮಾಡುವುದು?
- ಮೊದಲು ಒಂದು simple ಮತ್ತು useful idea ಆಯ್ಕೆ ಮಾಡಿಕೊಳ್ಳಿ (poster, background, icon, social media post).
- Photoshop / Illustrator / Canva ನಲ್ಲಿ clean ಮತ್ತು professional design ಮಾಡಿ.
- ಹೆಚ್ಚು text ಹಾಕಬೇಡಿ — simple, clear design ಇರಲಿ.
- trending topics ನೋಡಿ ಅದಕ್ಕೆ ಸಂಬಂಧಿಸಿದ design ಮಾಡುವುದು ಉತ್ತಮ.
- background, color, spacing clean ಆಗಿರಬೇಕು.
ಮುಖ್ಯವಾಗಿ ಗಮನಿಸಬೇಕಾದುದು:
- Copyright ಇರುವ images ಬಳಸಬಾರದು
- High quality (HD) design ಇರಬೇಕು
- upload ಮಾಡುವಾಗ Proper keywords ಕೊಡಬೇಕು
ಒಂದು ವೇಳೆ ನಿಮಗೆ Photoshop, Illustrator ನಲ್ಲಿ ಡಿಸೈನ್ ಗೊತ್ತಿಲ್ಲದಿದ್ದರೆ, AI ಬಳಸಿ ಡಿಸೈನ್ ಮಾಡಿ. Daily free credits ಕೊಟ್ಟಿರುವಂತ ವೆಬ್ ಸೈಟ್ ಗಳು ತುಂಬಾ ಇವೆ. Recraft AI ಈ ವೆಬ್ ಸೈಟ್ ನಲ್ಲಿ AI ನಿಂದ ಡಿಸೈನ್ ಮಾಡಬಹುದು. ಇದರಲ್ಲಿ daily free credit ಇದೆ.
Keywords ಮತ್ತು Trending ಮುಖ್ಯ ಪಾತ್ರ
ನಿಮ್ಮ ಡಿಸೈನ್‌ಗೆ ಸರಿಯಾದ ಕೀವರ್ಡ್‌ಗಳನ್ನು ನೀಡುವುದು ಅತ್ಯಂತ ಮುಖ್ಯ. ಜನರು ಹುಡುಕುವ ಪದಗಳಿಗೆ ಹೊಂದುವಂತೆ ಕೀವರ್ಡ್ ಹಾಕಿದರೆ ನಿಮ್ಮ ಡಿಸೈನ್ ಸರ್ಚ್‌ನಲ್ಲಿ ಮೇಲಕ್ಕೆ ಬರುತ್ತದೆ.
ಉದಾಹರಣೆ:
Adobe Stock ನಲ್ಲಿ “Trending” ಸೆಕ್ಷನ್ ಇರುತ್ತದೆ. ಅಲ್ಲಿ ಯಾವ ರೀತಿಯ ಡಿಸೈನ್‌ಗಳು ಹೆಚ್ಚು ಬೇಡಿಕೆಯಲ್ಲಿ ಇವೆ ಎಂಬುದನ್ನು ನೋಡಿ ಅದೇ ತರದ ಡಿಸೈನ್ ಮಾಡಬೇಕು. ಇದರಿಂದ ನಿಮ್ಮ ಡಿಸೈನ್ ಬೇಗ ಡೌನ್‌ಲೋಡ್ ಆಗುವ ಸಾಧ್ಯತೆ ಹೆಚ್ಚುತ್ತದೆ.
ನಿರಂತರತೆ = ಯಶಸ್ಸು
ಈ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ನಿರಂತರತೆ ಬಹಳ ಮುಖ್ಯ. ದಿನಕ್ಕೆ ಸ್ವಲ್ಪ ಸಮಯ ಕೊಟ್ಟರೂ ಸಾಕು, ಆದರೆ ನಿಯಮಿತವಾಗಿ ಡಿಸೈನ್ ಮಾಡಬೇಕು. ಒಂದು ತಿಂಗಳು ಮಾತ್ರ ಕೆಲಸ ಮಾಡಿ ಬಿಡಬಾರದು. ನೀವು 3 ರಿಂದ 6 ತಿಂಗಳು ನಿರಂತರವಾಗಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು.
ಪ್ಯಾಸಿವ್ ಇಂಕಮ್ ಗಳಿಸುವ ಸುಲಭ ಮಾರ್ಗ
ನೀವು ನಿರಂತರವಾಗಿ ಡಿಸೈನ್ ಮಾಡಿ ಅಪ್ಲೋಡ್ ಮಾಡುತ್ತಿದ್ದರೆ, ಒಂದು ಹಂತದ ನಂತರ ನಿಮ್ಮ ಹಳೆಯ ಡಿಸೈನ್‌ಗಳೇ ನಿಮಗೆ ಹಣ ತರಲು ಪ್ರಾರಂಭಿಸುತ್ತವೆ. ಇದು ಪ್ಯಾಸಿವ್ ಇಂಕಮ್‌ನ ಒಂದು ಉತ್ತಮ ಉದಾಹರಣೆ.
ನಿಮ್ಮಲ್ಲಿ ಗ್ರಾಫಿಕ್ ಡಿಸೈನ್ ಕೌಶಲ್ಯ ಇದ್ದರೆ ಇಂದೇ ಪ್ರಾರಂಭಿಸಿ. ದಿನಕ್ಕೆ ಕನಿಷ್ಠ ೨ ರಿಂದ ೩ ಗಂಟೆ ಸಮಯ ನೀಡಿದರೂ ಸಾಕು. ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿ ನಿಧಾನವಾಗಿ ಬೆಳೆಯಿರಿ. ತಾಳ್ಮೆ ಮತ್ತು ನಿರಂತರತೆ ಇದ್ದರೆ ಈ ಕ್ಷೇತ್ರದಲ್ಲಿ ನೀವು ಖಂಡಿತ ಯಶಸ್ಸು ಪಡೆಯಬಹುದು.