Telegram Join Telegram
ನಿಮಗೆ ಇಷ್ಟ ಆಯ್ತಾ ? ಲೈಕ್ ಕೊಡಿ:

ಕನ್ನಡ ಅಕ್ಷರ ಬರೆಯೋಣ | Kannada Akshara Bareyona – ಅಕ್ಷರ ಬರವಣಿಗೆ ಅಭ್ಯಾಸ – ಮಕ್ಕಳಿಗಾಗಿ ಮತ್ತು ಕಲಿಯುವವರಿಗಾಗಿ ಸುಲಭವಾದ ಆನ್‌ಲೈನ್ ಕನ್ನಡ ಅಕ್ಷರ ಬರೆಯುವ ಅಭ್ಯಾಸ ಮಾಡುವ ಟೂಲ್. ‘ಅ’ ದಿಂದ ‘ಅಃ’ ವರೆಗಿನ ಸ್ವರಗಳನ್ನು ಹೊಳೆಯುವ ಚುಕ್ಕೆಗಳ ಮೂಲಕ ಸುಲಭವಾಗಿ ಬರೆಯುತ್ತಾ ಕಲಿಯಿರಿ. ಸಂಪೂರ್ಣ ಉಚಿತ!

ಇದು ಕನ್ನಡ ಅಕ್ಷರ ಹೆಜ್ಜೆಯ ‘ಕನ್ನಡ ಅಕ್ಷರ ಬರೆಯೋಣ’ ದಲ್ಲಿ ‘ಅ’ ದಿಂದ ಅಃ ದವರೆಗೆ ಬರೆಯಲು ಅಭ್ಯಾಸ ಮಾಡುವ ಟೂಲ್ witzone – ವಿಟ್ ಝೋನ್ ನಿಂದ ಒಂದು ಹೊಸ ಪ್ರಯತ್ನ ಆಗಿದೆ.

ಮೊದಲಿಗೆ ಕನ್ನಡ ವರ್ಣಮಾಲೆಯ ಬಗ್ಗೆ ತಿಳಿಯೋಣ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಇವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ವರ್ಣಮಾಲೆಯ ಹೆಸರುಅಕ್ಷರಗಳು
ಸ್ವರಗಳು13
ವ್ಯಂಜನಗಳು34
ಯೋಗವಾಹಗಳು2
ಒಟ್ಟು49

ಸ್ವರಗಳು (Swaragalu – Vowels)

ಸ್ವರಗಳಲ್ಲಿ ಸ್ವತಂತ್ರವಾಗಿ ಉಚ್ಚರಿಸಬಹುದಾದ ಅಕ್ಷರಗಳು ಒಟ್ಟು 13 ಇವೆ.

ಸ್ವರಗಳಲ್ಲಿ 2 ವಿಧ –

1. ಹ್ರಸ್ವ ಸ್ವರಗಳು (ಕಡಿಮೆ ಸಮಯದಲ್ಲಿ ಉಚ್ಚರಿಸುವ ಸ್ವರ ಒಟ್ಟು – 6)

ಅ, ಇ, ಉ, ಋ, ಎ, ಒ

2. ದೀರ್ಘ ಸ್ವರಗಳು (ಹೆಚ್ಚು ಸಮಯದಲ್ಲಿ ಉಚ್ಚರಿಸುವ ಸ್ವರ ಒಟ್ಟು – 7)

ಆ, ಈ, ಊ, ಏ, ಐ, ಓ, ಔ

(ಸಂಪೂರ್ಣ ಅಕ್ಷರಗಳು: ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ)

‘ಅಂ’ ಮತ್ತು ‘ಅಃ’ ಇವುಗಳನ್ನು ಯೋಗವಾಹಗಳು ಅಥವಾ ಅನುಸ್ವಾರ ಮತ್ತು ವಿಸರ್ಗ ಎಂದು ಕರೆಯಲಾಗುತ್ತದೆ, ಇವು ಸ್ವರಗಳೂ ಅಲ್ಲ, ವ್ಯಂಜನಗಳೂ ಅಲ್ಲ.

ಇಲ್ಲಿ ನೀವು ಅಕ್ಷರ ಬರೆಯಿರಿ. ಕಲಿಯಿರಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.